ಅಮೈನೋ ಆಮ್ಲಗಳು ಎಂದರೆ ಅಮೈನೋ ಮತ್ತು ಆಮ್ಲೀಯ ಗುಂಪುಗಳಿರುವ ರಾಸಾಯನಿಕ ಸಂಯುಕ್ತಗಳು. ನಿಸರ್ಗದಲ್ಲಿ ದೊರೆವ ಅಮೈನೋ ಆಮ್ಲಗಳಲ್ಲಿ ಹೆಚ್ಚು ಪಾಲು -ಅಮೈನೋ ಆಮ್ಲಗಳು. == ಹಿನ್ನೆಲೆ == ಇವುಗಳಲ್ಲಿ ಅಮೈನೋ ಓಊ2 ಗುಂಪು ಕಾರ್ಬಾಕ್ಸಿಲ್ -ಅಔಔಊ ಗುಂಪಿನ ಪಕ್ಕದಲ್ಲಿರುತ್ತವೆ. ಅಮೈನೋ ಆಮ್ಲದ ಸಾಮಾನ್ಯ ಸಂಕೇತಸೂತ್ರ ಖ.ಅಊ(ಓಊ2).ಅಔಔಊ. ಒಂದೊಂದು ಅಮೈನೋ ಆಮ್ಲದಲ್ಲೂ ಖಗುಂಪು ಬೇರೆ ಬೇರೆಯಾಗಿರುತ್ತದೆ. ಇವುಗಳ ಜೊತೆಗೆ, -ಸ್ಥಾನವಲ್ಲದೆ ಬೇರೆಡೆಗಳಲ್ಲಿ ಅಮೈನೋ ಗುಂಪಿರುವ ಇತರ ಅಮೈನೋ ಆಮ್ಲಗಳೂ ಇವೆ.ಇನ್ನು ಕೆಲವುಗಳಲ್ಲಿ ಒಂದಕ್ಕಿಂತ ಹೆಚ್ಚು ಅಮೈನೋ ಗುಂಪು ಅಥವಾ ಕಾರ್ಬಾಕ್ಸಿಲ್ ಗುಂಪುಗಳಿರಬಹುದು. ಮೇಲಿನ ಸೂತ್ರದ - ಇಂಗಾಲದ ಪರಮಾಣು ಅಸಮಾಂಗತ್ವದ್ದು (ಎಸಿಮೆಟ್ರಿಕ್) ಎಂದಿದೆ. ಏಕೆಂದರೆ ಇದು ನಾಲ್ಕು ಬೇರೆ ಬೇರೆ ಗುಂಪುಗಳೊಡನೆ ಕೂಡಿದೆ. ಈ ಸಂಯುಕ್ತ ದ್ಯುತಿಚಟುವಟಿಕೆಯನ್ನು (ಆಪ್ಟಿಕಲ್ ಆ್ಯಕ್ಟಿವಿಟಿ) ತೋರುವುದು-ಧ್ರುವೀಕೃತ ಬೆಳಕನ್ನು ಇದು ತಿರುಗಿಸುವುದು. ಹೀಗೆ ಒಂದು ಅಮೈನೋ ಆಮ್ಲ ಎಡಮುರಿಯ (ಎಲ್-) ಇಲ್ಲವೇ ಬಲಮುರಿಯ (ಡಿ-) (ಎಲ್-ಆರ್‍ಡಿ-ಕನ್‍ಫಿಗುರೇಷನ್) ರಚನೆಯಲ್ಲಿರಬಹುದು. ಈ ಎರಡು ರೂಪಗಳನ್ನು ಒಂದರ ಮೇಲೊಂದು ಬೆರಳನ್ನು ಇಡಲಾಗದ ಒಂದು ಜೊತೆ ಒಂದೇ ತೆರನ ಕೈಗಳಿಗಾಗಲೀ, ಒಂದಕ್ಕೊಂದು ಅದಲುಬದಲು ಮಾಡಲಾಗದ ಒಂದು ಜೊತೆ ಕೈಚೀಲಗಳಿಗಾಗಲೀ ಹೋಲಿಸಬಹುದು. ಇವೆರಡು ರೂಪಗಳು ರಾಸಾಯನಿಕ ಗುಣಗಳಲ್ಲಿ ಗಮನಾರ್ಹ ವ್ಯತ್ಯಾಸವೇನೂ ಹೊಂದಿಲ್ಲ. ಆದರೂ ಅಮೈನೋ ಆಮ್ಲದ ಎಡಮುರಿ ರೂಪವೇ ಪ್ರಕೃತಿಯಲ್ಲಿ ದೊರೆವ ಮುಖ್ಯ ಬಗೆಯದು. == ನಿಸರ್ಗದಲ್ಲಿ ಅಮೈನೋ ಆಮ್ಲಗಳು == ಅನೇಕ ಪ್ರೊಟೀನುಗಳಲ್ಲಿ ಹೆಚ್ಚಾಗಿ ಸಿಗುವ ಎಡಮುರಿ ಅಮೈನೋ ಆಮ್ಲಗಳು ಸುಮಾರು (20) ಇವೆ. ಬದುಕಿರುವ ಎಲ್ಲ ಜೀವಕಣಗಳಲ್ಲೂ ಬೇರೆ ಬೇರೆ ರೂಪಗಳಲ್ಲಿ ಪ್ರೊಟೀನುಗಳು ಹೆಚ್ಚಿನ ಅಣುತೂಕದ ಸಂಯುಕ್ತಗಳು. ಇತ್ತೀಚಿಗೆ ಮುಖ್ಯವಾಗಿ ಒಂದು ಸೋಸುವ ಕಾಗದದ (ಫಿಲ್ಟರ್ ಪೇಪರ್) ಮೇಲೆ ಬೇರೆ ಬೇರೆ ಅಮೈನೋ ಆಮ್ಲಗಳನ್ನು ಬೇರ್ಪಡಿಸುವ ಕಾಗದದ ವರ್ಣಮಾಪನ ವಿಧಾನವೆಂಬ (ಪೇಪರ್ ಕ್ರೊಮೊಟೋಗ್ರಫಿ) ಪ್ರಬಲ ಸಾಧನ ಬಳಕೆಗೆ ಬಂದ ಮೇಲೆ ಅಮೈನೋ ಆಮ್ಲಗಳ ಒಂದು ಪಡೆಯೇ ಗೊತ್ತಾಗಿದೆ. ಇಲ್ಲಿನ ತನಕ (180)ಕ್ಕೂ ಮೀರಿದಷ್ಟು ಅಮೈನೋ ಆಮ್ಲಗಳು ತಿಳಿದಿವೆ. ಇವುಗಳಲ್ಲಿ ಈ ಹೊಸ ಅಮೈನೋ ಆಮ್ಲಗಳು ಬಹುಪಾಲು ಗಿಡಮರಗಳಲ್ಲಿ ಸೂಕ್ಷ್ಮ ಜೀವಾಣುಗಳಂಥ ಕೆಳದರ್ಜೆಯ ಜೀವಿಗಳಲ್ಲೂ ಕಂಡುಬಂದಿವೆ. ಇವುಗಳಲ್ಲಿ ಎಲ್ಲವೂ ಎಡಮುರಿಯವಲ್ಲ. ಜೀವಿರೋಧಕಗಳು (ಅ್ಯಂಟಿಬಯೋಟಿಕ್ಸ್) ವಿಷಗಳಂಥ ಮದ್ದಾಗಿ ವರ್ತಿಸುವ ಅನೇಕ ಸಂಯುಕ್ತಗಳಲ್ಲಿ ಬಲಮುರಿಯ ಅಮೈನೋ ಆಮ್ಲಗಳೂ ನಿಸರ್ಗದಲ್ಲಿ ಎಷ್ಟೋ ಇವೆ. ಕೆಲವು ದಂಡಾಣುಜೀವಿಗಳ (ಬ್ಯಾಸಿಲ್ಲಸ್ ಸಬ್‍ಟೆಲಿಸ್) ಕಣಗೋಡೆಯಲ್ಲಿ ಇವಿವೆ. ನಿಸರ್ಗದಲ್ಲಿ ಬಿಡಿಯಾಗಿ ಸಿಗುವ ಅಮೈನೋ ಆಮ್ಲಗಳು ಹೇರಳವಾಗಿದ್ದರೂ (1935)ರಲ್ಲಿ ತ್ರಿಯೊನೀನನ್ನು ಕಂಡುಹಿಡಿದಾಗಿಂದ ಪ್ರೊಟೀನುಗಳಲ್ಲಿನ ಅಮೈನೋ ಆಮ್ಲಗಳು ಮಾತ್ರ ಸುಮಾರು (20)ಕ್ಕೆ ಮೀರಿಲ್ಲ. ಜೀವವಸ್ತು ಕರಣದ ನಿಜಗೆಲಸಗಳಲ್ಲಿ (ಮೆಟಬಾಲಿಕ್ ಫಂಕ್ಷನ್ಸ್) ಹೊಸದಾಗಿ ಕಂಡುಬಂದ ಈ ಅಮೈನೋ ಆಮ್ಲಗಳ ಪಾತ್ರ ಏನೇನೂ ತಿಳಿದಿಲ್ಲ. == ಅಮೈನೋ ಆಮ್ಲಗಳು, ಪ್ರೊಟೀನುಗಳು == ಪ್ರೊಟೀನುಗಳ ತಯಾರಿಕೆಯೇ ಎಡಮುರಿ ಅಮೈನೋ ಆಮ್ಲಗಳ ಮುಖ್ಯ ಕೆಲಸ. ಅಮೈನೋ ಆಮ್ಲಗಳು ಪ್ರೊಟೀನುಗಳನ್ನು ಕಟ್ಟುವ ಇಟ್ಟಿಗೆಗಳು. ಒಂದು ಅಮೈನೋ ಆಮ್ಲದ ಅಮೈನೋ -ಓಊ2 ಗುಂಪು ಇನ್ನೊಂದು ಅಮೈನೋ ಆಮ್ಲದ ಕಾರ್ಬಾಕ್ಸಿಲ್ -ಅಔಔಊ ಗುಂಪಿನೊಡನೆ ಕೂಡಿ ಆಗುವ ಪೆಪ್ಟೈಡು (-ಅಔ-ಓಊ2) ಬಂಧಗಳು (ಬಾಂಡ್ಸ್) ಈ ಅಮೈನೋ ಆಮ್ಲಗಳನ್ನು ಪ್ರೊಟೀನಿನ ಅಣುಗಳಲ್ಲಿ ಬಂಧಿಸಿವೆ. ಹೀಗೆ ಬೇರೆ ಬೇರೆ ಅಮೈನೋ ಆಮ್ಲಗಳನ್ನು ಬೇರೆ ಬೇರೆ ಪರಿಮಾಣಗಳಲ್ಲಿ ಒಂದುಗೂಡಿಸಿ ಬಲು ಉದ್ದದ ಪಾಲಿಪೆಪ್ಟೈಡ್ ಶ್ರೇಣಿಗಳನ್ನು ತಯಾರಿಸಬಹುದು. ಸುಮಾರು (20) ಅಮೈನೋ ಆಮ್ಲಗಳಿಂದ ಎಲ್ಲ ಪ್ರೊಟೀನುಗಳಲ್ಲೂ ತಯಾರಾಗಿವೆ. ಆದರೆ ಪ್ರೊಟೀನ್ ಅಣುರಚನೆಯಲ್ಲಿನ ವಿವಿಧ ಅಮೈನೋ ಆಮ್ಲಗಳು ಮತ್ತು ಅವು ಜೋಡಣೆಗೊಂಡಿರುವ ರೀತಿಗಳು ಬೇರೆ ಬೇರೆ ಪ್ರೊಟೀನುಗಳಲ್ಲಿ ಬೇರೆ ಬೇರೆಯಾಗಿವೆ. ಕೆಲವು ಅಮೈನೋ ಆಮ್ಲಗಳಂತೂ ಬಲು ಅಪೂರ್ವ: ಹೈಡ್ರಾಕ್ಸಿಪ್ರೋಲಿನ್ ಅಮೈನೋ ಆಮ್ಲ ಅಂಟುಜನಕದಲ್ಲೂ (ಕೊಲ್ಲಾಜೆನ್) ತೈರಾಕ್ಸಿನ್ ಅಮೈನೋ ಆಮ್ಲ ತೈರೋಗ್ಲಾಬ್ಯುಲಿನ್‍ನಲ್ಲೂ ಇವೆ. ಪ್ರೊಟೀನುಗಳು ವೈವಿಧ್ಯ ದೊರೆಯುವ ತರಾವಳಿ ರೂಪಗಳು, ಅವು ತೋರುವ ಅಪಾರ ಜೀವವಸ್ತುಕರಣದ ನಿಜಗೆಲಸಗಳೂ, ಪ್ರೊಟೀನಿನಲ್ಲಿ ಬೇರೆ ಬೇರೆ ಅಮೈನೋ ಆಮ್ಲಗಳು ಜೋಡಣೆಯಾಗಿರುವ ಕ್ರಮಗತಿಗಳಿಗೆ ಅನುಗುಣವಾಗಿ ಇರಬಹುದು. ಈ ಮೂಲ ಕ್ರಮಗತಿ ತಳಿಯ ಅಂಶಗಳಿಂದ ನಿರ್ದಾರವಾಗುತ್ತದೆ. ಸಾಮಾನ್ಯವಾಗಿ ಅಣು ತೂಕ (10,000) ಮೀರಿದ ಪಾಲಿಪೆಪ್ಟೈಡು ಪ್ರೊಟೀನ್ ಎನ್ನಿಸಿಕೊಳ್ಳುವುದು. ಆದರೆ ಇನ್ಸುಲಿನ್‍ನಂಥ ಹಲವಾರು ಪ್ರೊಟೀನ್ ಚೋದನಿಕಗಳ (ಹಾರ್ಮೋನ್ಸ್) ಅಣುತೂಕದ (10,000)ಕ್ಕಿಂತ ಕಡಿಮೆಯಾಗಿರುವುದರಿಂದ ಇದೇನೂ ಕಟ್ಟಾ ನಿಯಮವಲ್ಲ. == ಅಮೈನೋ ಆಮ್ಲಗಳ ಸಾಮಾನ್ಯ ಜೀವವಸ್ತುಕರಣ == ಎಲ್ಲ ಅಮೈನೋ ಆಮ್ಲಗಳ ರಾಸಾಯನಿಕ ರಚನೆಯೂ ಒಂದೇ ಬಗೆಯಲ್ಲಿ ಇರುವುದರಿಂದ, ಇವುಗಳ ಜೀವರಾಸಾಯನಿಕ ವರ್ತನೆಗಳೂ ಬಹುಮಟ್ಟಿಗೆ ಒಂದೇ ತೆರ. ಈ ವರ್ತನೆಗಳನ್ನು ಪ್ರೊಟೀನ್ ಗುಣದ ಜೀವರಾಸಾಯನಿಕ ವೇಗವರ್ಧಕಗಳಾದ (ಕೆಟಾಲಿಸ್ಟ್‍ಸ್) ಕಿಣ್ವಗಳು (ಎನ್‍ಝೈಮ್ಸ್) ವೇಗವರ್ಧಿಸುತ್ತವೆ. ಅಮೈನೋ ಆಮ್ಲಗಳ ಜೀವವಸ್ತುಕರಣದ ಹಲವಾರು ಕಿಣ್ವಗಳ ಚಟುವಟಿಕೆಗೆ ಪ್ಯಾóಕ್ಟರ್ ಇಲ್ಲವೆ ಸಹಕಿಣ್ವವಾದ ಪಿರಿಡಾಕ್ಸಾಲ್ ಫಾಸ್ಫೇಟು ಬೇಕು. ಈ ಕೂಡಂಶ ಃ6 ಜೀವಾತುವಿಂದ ಹುಟ್ಟುತ್ತದೆ. ಃ6 ಜೀವಾತಿನ ಕೊರತೆ ದೇಹದಲ್ಲಿ ಉಂಟಾದರೆ ಅಮೈನೋ ಆಮ್ಲಗಳ ಜೀವವಸ್ತುಕರಣ ಕೆಡುವುದು. ಕರುಳಿನಿಂದ ಆಹಾರದ ರಕ್ತಗತವಾಗುವ ಮುಖ್ಯ ಕೆಲಸವೂ ಕೆಡಬಹುದು. ಅಮೈನೋ ಆಮ್ಲಗಳನ್ನು ಒಡೆಕೆಡುವುವ ಜೀವವಸ್ತುಕರಣಕ್ಕೆ (ಡಿಗ್ರೆಡೇಟಿವ್ ಮೆಟಬಾಲಿಸಂ) ಮುಖ್ಯವಾಗಿ ಎರಡು ದಾರಿಗಳಿವೆ. ಮೊದಲನೆಯ ದಾರಿಯಲ್ಲಿ ಅಮೈನೋ ಗುಂಪಿನ ಬೇರ್ಪಡೆಯಾಗಿ (ಅ-ಅ ಸೀಳಿಕೆ), ಇದು ಒಂದು ಇಂಗಾಲ ಶ್ರೇಣಿಯಾಗಿ ಪರಿವರ್ತನೆ ಹೊಂದಿ ಈ ಶ್ರೇಣಿ ಕೊಬ್ಬು, ಕಾರ್ಬೋಹೈಡ್ರೇಟುಗಳ ಎರಡರ ಜೀವವಸ್ತುಕರಣಕ್ಕೂ ಸಾಮಾನ್ಯವಾಗಿರುವ ಉತ್ಪನ್ನಗಳಾಗಿ ಬದಲಾಗುವ ಇಂಗಾಲ ಶ್ರೇಣಿಯಾಗುತ್ತದೆ. ಅಮೈನೋ ಗುಂಪಿನ ಸಾರಜನಕ ಕೊನೆಗೆ ಯೂರಿಯ, ಯೂರಿಕ್ ಆಮ್ಲ, ಅಮೋನಿಯಗಳಲ್ಲಿ ಕಾಣಿಸಿಕೊಳ್ಳುವುದು. ಪ್ರಮಾಣದಲ್ಲಿ ಎರಡನೆಯದಾರಿ ಅಷ್ಟು ಮುಖ್ಯವಲ್ಲ. ಇದರಲ್ಲಿ ಕಾರ್ಬಾಕ್ಸಿರ್ಲ ಗುಂಪಿನ ಬೇರ್ಪಡೆಯಾಗಿ (ಸಿ-ಸಿ ಸೀಳಿಕೆ) ಬರುವ ಅಮೀನುಗಳು ಬಲವಾದ ಅಂಕೆಲಸದ (ಫಿಸಿಯಲಾಜಿಕಲ್) ಪರಿಣಾಮಗಳನ್ನು ತೋರುತ್ತವೆ. ಆಮ್ಲಜನಕಗೂಡಿ ಈ ಅಮೀನುಗಳು ಆಯಾ ಆಮ್ಲಗಳಾಗಿ ಮೈಯಿಂದ ಹೊರಬೀಳುತ್ತವೆ. == ವರ್ಗಾವಣೆ == ಒಂದು ಅಮೈನೋ ಆಮ್ಲದ ಅಮೈನೋ ಗುಂಪು ಇನ್ನೊಂದರ ಕೀಟೋ ಆಮ್ಲಕ್ಕೆ ಆಗುವ ವರ್ಗಾವಣೆಯನ್ನು ವೇಗವರ್ಧಿಸುವ ಕಿಣ್ವ ಟ್ರಾನ್ಸ್‍ಮಿನೇಸ್. ಅವಕ್ಕೆ ತಕ್ಕ ಕೀಟೋ ಆಮ್ಲಗಳಿಂದ ಅವಶ್ಯವಾದ ಮತ್ತು ಅನವಶ್ಯವಾದ ಅಮೈನೋ ಆಮ್ಲಗಳ ಉತ್ಪಾದನೆಗೆ ಒಂದು ತಂತ್ರ ಈ ಟ್ರಾನ್ಸಿಮಿನೇಷನ್ ಕ್ರಿಯೆ ಒದಗಿಸುವುದು. ಅಂದರೆ ಟ್ರಾನ್ಸ್‍ಮಿನೇಷನ್ನಿಂದ -ಓಊ2 ಗುಂಪನ್ನು ಜೋಡಿಸಬಹುದಾದರೂ ಅವಶ್ಯವಾದ ಅಮೈನೋ ಆಮ್ಲಗಳ ವಿಚಾರದಲ್ಲಿ ಅವಶ್ಯ ಅಮೈನೋ ಆಮ್ಲದ ತಯಾರಿಕೆಗೆ ಬೇಕಿರುವ ಇಂಗಾಲದ ಚೌಕಟ್ಟನ್ನು ಪ್ರಾಣಿ ತಾನೇ ಕಟ್ಟಲಾರದೆಂದು ಅರ್ಥ. ಶರೀರದ ಅನೇಕ ಅಮೈನೋ ಆಮ್ಲಗಳನ್ನು ಒಡೆಕೆಡವುದರಲ್ಲಿ ಕೂಡ ಟ್ರಾನ್ಸ್‍ಮಿನೇಷನ್ ಮೊದಲ ಹೆಜ್ಜೆ. ಮಾನವನಲ್ಲಿ ಸಾರಜನಕ ಜೀವವಸ್ತುಕರಣದಿಂದ ಬರುವ ಮುಖ್ಯ ಕೊನೆಯ ಉತ್ಪನ್ನ ಯೂರಿಯ. ಇದು ಮೂತ್ರದ ಮೂಲಕ ಹೊರಬೀಳುವುದು. ಸಿಟ್ರುಲೀನ್, ಅರ್ನಿತೀನ್ ಮತ್ತು ಅರ್ಜಿನೀನ್‍ಗಳು ಸೇರಿರುವ ಸುತ್ತಿನ ಶ್ರೇಣಿಯಲ್ಲಿ. ಈ ಮಾರ್ಪಾಟು ಈಲಿಯಲ್ಲಿ (ಲಿವರ್) ಆಗುವುದು. ಅಮೈನೋ ಆಮ್ಲಗಳಿಂದ ಅಮೋನಿಯ ಹೊರಬೀಳುವ ಯೂರಿಯ ಆಗಿ ವಿಷ ಕಳೆಯುತ್ತದೆ. == ಜೀವ ವಸ್ತುಕರಣ == ಅಮೈನೋ ಆಮ್ಲದಲ್ಲಿ ಕಾರ್ಬಾಕ್ಸಿಲ್ ಕಳೆದಾಕ (ಡಿಕಾರ್ಬಾಕ್ಸಿಲೇಟ್), ಅಂದರೆ ಅದರಿಂದ ಇಂಗಾಲ ಡೈಆಕ್ಸೈಡನ್ನು ತೆಗೆದಾಗ ಬರುವ ಸಂಯುಕ್ತ ಖ.ಅಊ2ಓಊ2 ಎಂಬ ಸಾಮಾನ್ಯಸಂಕೇತ ಸೂತ್ರದ ಆಮೀನ್ ಆಗಿರುವುದು. ಅಮೈನೋ ಆಮ್ಲಕ್ಕೆ ತಕ್ಕಂತೆ ಗುಂಪಿನ ರಚನೆ. ಈ ಅಮೈನೋ ಆಮ್ಲದ ಕಾರ್ಬಾಕ್ಸಿಲ್ ಕಳೆದ ಕಿಣ್ವಗಳ (ಡಿಕಾರ್ಬಾಕ್ಸಿಲೇಸ್) ವರ್ತನೆಗೂ ಪಿರಡಾಕ್ಸಾಲ್ ಫಾಸ್ಫೇಟು ಬೇಕು. ಈ ವರ್ತನೆಯಿಂದ ತಯಾರಾದ ಕೆಲವು ಅಮೀನುಗಳಲ್ಲಿ ಕೆಲವು ಜೀವ ವಸ್ತುಕರಣದಲ್ಲಿ ಬಲು ಪಟುವಾಗಿವೆ. ಹಿಸ್ಟಡೀನಿಂದ ಬಂದ ಹಿಸ್ಟಮೀನ್ ಅನೇಕ ಒಗ್ಗದಿಕೆಯ (ಅಲರ್ಜಿಕ್) ಬೇನೆಗಳಿಗೆ ಕಾರಣ. 5-ಹೈಡ್ರಾಕ್ಸಿಟ್ರಿಪ್ಟೊಫೇನಿಂದ ಬಂದ 5-ಹೈಡ್ರಾಕ್ಸಿಟಿಪ್ಟಮೀನಿಗೆ (ಸೆರೋಟೋನಿನ್) ಮಿದುಳಿನ ನಿಜಗೆಲಸಗಳಲ್ಲಿ ಮುಖ್ಯ ಪಾತ್ರವಿದೆ. ಟೈರೊಸೀನಿಂದ ಅಡ್ರಿನಲೀನ್ ನಾರಡ್ರಿನಿಲೀನುಗಳ ತಯಾರಿಕೆಯಲ್ಲಿ ಡಿಕಾರ್ಬಾಕ್ಸಿಲೇಷನ್ನಿನ ಪಾತ್ರ ಪ್ರಮುಖವಾದುದು. ಅಮೈನೋ ಆಮ್ಲಗಳ ಇಂಗಾಲದ ಚೌಕಟ್ಟು ಕಾರ್ಬೋಹೈಡ್ರೇಟ್, ಕೊಬ್ಬುಗಳ ಜೀವವಸ್ತುಕರಣದಿಂದ ಬರುವ ಉತ್ಪನ್ನಗಳಿಗೆ ಕಾರಣವಾಗುವುದು. ಶರೀರಕ್ಕೆ ಶಕ್ತಿ ಒದಗಿಸಲೂ, ಮಿಗದಿಟ್ಟು (ಗ್ಲೈಕೊಜನ್) ಇಲ್ಲವೇ ಕೊಬ್ಬಾಗಿ ಕೂಡಿಡಲೂ ಈ ಉತ್ಪನ್ನಗಳು ಆಮೇಲೆ ಆಮ್ಲಜನಕಗೂಡಿಸಬಹುದು. ಕೊಬ್ಬನ್ನು ಕೂಡಿಟ್ಟಂತೆ ಮೈಯಲ್ಲಿ ಪ್ರೊಟೀನುಗಳನ್ನು ಕೂಡಿಡುವಂತಿಲ್ಲ. ಆದರೂ ಹೊಟ್ಟೆಗಿಲ್ಲದ ತುರ್ತಿನ ಹೊತ್ತುಗಳಲ್ಲಿ ಮಿದುಳ, ಗುಂಡಿಗೆಗಳಂಥ ಜೀವಾಳದ ಅಂಗಗಳ ಅವಶ್ಯಕತೆಗಳನ್ನು ಶರೀರದ ಪ್ರೊಟೀನುಗಳು ಒದಗಿಸುವುವು. == ಅಮೈನೋ ಆಮ್ಲದ ಕಾರಣದಿಂದ ದೇಹದ ಮೇಲೆ ಆಗುವ ನ್ಯೂನತೆ == ಹುಟ್ಟಿನಿಂದ ಬಂದ ಅಮೈನೋ ಆಮ್ಲದ ಜೀವವಸ್ತುಕರಣದ ತಪ್ಪುಗಳು : ಮಾನವನಲ್ಲಿ, ಒಂದು ಅಮೈನೋ ಆಮ್ಲದ ಜೀವವಸ್ತುಕರಣದ ಒಂದೇ ಒಂದು ವರ್ತನೆ ಕಟ್ಟಿರುವ ಹಲವಾರು ಸಂದರ್ಭಗಳು ಗೊತ್ತಿವೆ. ಹುಟ್ಟಿನಿಂದ ಬಂದ ಈ ತಪ್ಪುಗಳು ತಳಿಮ ಅಂಶಗಳಿಂದ ಏಳುತ್ತವೆ. ಹುಟ್ಟುತ್ತ ಬರುವುದಲ್ಲದೆ, ಒಂದು ಗೊತ್ತಾದ ಮಾದರಿಯಲ್ಲಿ ಕುಟುಂಬದಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ ಕ್ಯಾಪ್ಟೋನ್ ಮೂತ್ರಬೇನೆ ಮೊಟ್ಟಮೊದಲು ಗುರುತಿಸಲಾದವಲ್ಲಿ ಒಂದು. ಈ ನ್ಯೂನತೆಯಲ್ಲಿ ಟಿರೊಸೀನ್ ಒಡೆಕೆಡವಿದ್ದರಿಂದ ಬಂದ ಹೋಮೋಜೆಂಟಿಸಿದ್ ಆಮ್ಲ ಮುಂದೆ ಜೀವವಸ್ತುಕರಣವಾಗದೆ ಹಾಗೇ ಮೂತ್ರದಲ್ಲಿ ಹೊರಬೀಳುವುದು. ಇದನ್ನು ಗಾಳಿಗೆ ಒಡ್ಡಿದಾಗ ಕಪ್ಪು ಬಣ್ಣಕ್ಕೆ ತಿರುಗುವುದು. ಸಾಮಾನ್ಯವಾಗಿ ಬುದ್ಧಿ ಮಂಕಾಗುವ ಫಿನೈಲ್ ಕೀಟೋನ್ ಮೂತ್ರಬೇನೆಯಲ್ಲಿ, ಫಿನೈಲನಲೀನ್ ಎಂದಿನಂತೆ ಟೈರೊಸೀನಾಗೆ ಮಾರ್ಪಡುವುದು ಕೊರೆಯಾಗಿರುತ್ತದೆ. ಆಗ ಫಿನೈಲನಲೀನ್ ಹೇರಳವಾಗಿ ಕೂಡಿರುತ್ತದೆ. ಅವಶ್ಯವಾದ ಅಮೈನೋ ಆಮ್ಲವಾದ ಫಿನೈಲನಲೀನ್‍ನಿಂದ ಎಂದಿನಂತೆ ಹುಟ್ಟುವ ಅನವಶ್ಯ ಅಮೈನೋ ಆಮ್ಲವಾದ ಟೈರೊಸೀನ್ ಕೂಡ ಇಂಥ ಹೊತ್ತಿನಲ್ಲಿ ಅವಶ್ಯವೆನಿಸಿಕೊಳ್ಳುವುದು. ಮೂಲವಾಗಿ ತಳಿಯ ಕೆಡುಕಿನಿಂದಲೇ, ಫಿನೈಲ್‍ಕೀಟೋನ್ ಮೂತ್ರದಲ್ಲಿ ಮಿದುಳು ಕೆಟ್ಟಿರುವುದು. ಮುಂಚೆಯೇ ಈ ಕೆಡುಕನ್ನು ಕಂಡುಕೊಂಡರೆ, ಮಿದುಳಿಗೆ ಕೆಡುಕಾಗುವುದನ್ನು ತಪ್ಪಿಸಬಹುದು. ಇಂಥ ಮಕ್ಕಳ ಆಹಾರದಲ್ಲಿ ಸಾಕಷ್ಟು ಟೈರೊಸೀನ್ ಇರಬೇಕು. ಫಿನೈಲನಲೀನ್ ಕಡಿಮೆಯಾಗಿರಬೇಕು. ಮಾತು ಬರದಿರುವ ಕೆಲವು ರೋಗಿಗಳಲ್ಲಿ, ಹೆಸ್ಟಿಡೀನ್ ಯೂರೋಕೇನಿಕ್ ಆಮ್ಲಕ್ಕೆ ಮಾರ್ಪಾಡಾಗದಿರಲು, ಈ ವರ್ತನೆಯನ್ನು ವೇಗವರ್ಧಿಸುವ ಕಿಣ್ವ ಈ ರೋಗಿಯಲ್ಲಿ ಇರುವುದಿಲ್ಲ. ಹೀಗೆ ಬಹುಮಟ್ಟಿಗೆ ಎಲ್ಲ ಅಮೈನೋ ಆಮ್ಲಗಳಿಗೂ ಹೇಳುವಂತೆ, ಅದೇ ತೆರನ ತಳಿಯ ಅಂಶಗಳಿಂದೇಳುವ ಕಿಣ್ವದ ಕೊರೆಗಳೂ ಗೊತ್ತಾಗಿವೆ. ಚೆನ್ನಾಗಿ ಗೊತ್ತಿರುವ ಇಂಥ ಕೆಲವು; ಆಲ್‍ಬಿನಿಸಂ ಇದು ವರ್ಣ ಕೋಶಗಳಿಗೆ ಸೀಮಿತವಾದ ನ್ಯೂನತೆ; ಮೆಲನಿನ್ ಎಂಬ ದ್ರವ್ಯಉಂಟಾಗದಿರುವುದರಿಂದ ಇದು ಸಂಭವಿಸುವುದು. ವ್ಯಾಲೀನ್ ಲ್ಯೂಸಿನ್ ಐಸೊಲ್ಯೂಸೀನ್‍ಗಳ ಜೀವವಸ್ತುಕರಣದ ಕೊರೆಯಿಂದಾದ ಮೇಪಲ್ ಸಕ್ಕರೆ ಪಾಕದ ಮೂತ್ರರೋಗ; ಹೀಗೇ ಸಿಸ್ಟತಯೋನೀನ್, ಸಿಟ್ರುಲ್ಲೀನೂ ಮೂತ್ರದಲ್ಲಿ ಹೊರಬೀಳುತ್ತಿರಬಹುದು. ರಕ್ತಸಂಬಂಧಿಗಳ ಮದುವೆಗಳಿಂದ ಹುಟ್ಟಿದ ಮಕ್ಕಳಲ್ಲಂತೂ ಈ ಜೀವವಸ್ತುಕರಣದ ಕೊರೆಗಳು ಹೆಚ್ಚಿರುತ್ತವೆ. ಅಮೈನೋ ಆಮ್ಲದ ಜೀವವಸ್ತುಕರಣದಲ್ಲಿನ ಈ ತೆರನ ತಳಿಯ ಬಹುಮಟ್ಟಿಗೆ ಕೆಡುಕುಗಳಲ್ಲೂ ಮಿದುಳಿನ ಬೇನೆ ಇದ್ದೇ ಇರುತ್ತದೆ. == ರೋಗಿಗಳಲ್ಲಿ ಅಮೈನೋ ಆಮ್ಲಗಳ ಹೆಚ್ಚಳಿಕೆ == ಗುಂಡಿಗೆ ಸ್ನಾಯುವಿನ ಗಿಡುಕೆಯ (ಇನ್‍ಫಾರ್ಕ್‍ಷನ್) ರೋಗಿಗಳ ರಕ್ತದಲ್ಲಿ ಟ್ರಾನ್ಸ್‍ಮಿನೇಸ್ ಕಿಣ್ವ ಏರಿರುವುದು. ಹಲವಾರು ರೋಗಗಳಲ್ಲಿ ಮೂತ್ರದಲ್ಲಿ ಹೊರಬೀಳುವ ಅಮೈನೋ ಆಮ್ಲಗಳಿಂದ ರೋಗವನ್ನು ಕಂಡುಹಿಡಿಯಲೂ ಚಿಕಿತ್ಸಿಸಲೂ ಅನುಕೂಲ. ಫ್ಯಾಂಕೊನಿ ಲಕ್ಷಣಕೂಟ (ಸಿಂಡ್ರೋಮ್), ವಿಲ್ಸನ್ನನರೋಗ, ಮೂತ್ರಪಿಂಡದ ಎಲುಮುರುಟುಗಳಲ್ಲಿ (ರೀನಲ್ ರಿಕೆಟ್ಸ್) ಸಾಮಾನ್ಯವಾಗಿ ಮೂತ್ರದಲ್ಲಿ ಅಮೈನೋ ಆಮ್ಲಗಳು ಹೆಚ್ಚಾಗಿ ಹೋಗುತ್ತವೆ. ಸಿಸ್ವೀನ್, ಅರ್ನಿತೀನ್, ಅರ್ಜಿನೀನ್ ಲೈಸೀನ್ ಅಮೈನೋ ಆಮ್ಲಗಳ ಕೆಡುಕುಗಳಲ್ಲಿ ಸಿಸ್ಟೀನ್ ಮೂತ್ರ ಆಗುವುದು. ಟ್ರಿಪ್ಟೊಫೇನ್ ಸರೋಟೋನಿನ್ ಆಗುವಾಗ ನಡುವಣ ಜೀವವಸ್ತುವಾದ (ಮೆಟನೊಲೈಟ್) 5-ಹೈಡ್ರಾಕ್ಸಿ ಇಂಡೋಲ್ ಅಸಿಟಿಕ್ ಆಮ್ಲವನ್ನು ವಿಷಮ ಏಡಿಗಂತಿತೆರ ಬೇನೆಯ ರೋಗಿಗಳು (ಪೇಷಂಟ್ಸ್ ವಿತ್ ಮೆಲಿಗ್ನೆಂಟ್ ಕಾರ್ಸಿನಾಯ್‍ಡ್) ಮೂತ್ರದಲ್ಲಿ ಹೇರಳವಾಗಿ ಹೊರದೂಡುವರು. ಸೆರೋಟೋನಿಸ್ ತಯಾರಿಕೆಗಾಗಿ ಟ್ರಿಪ್ಟೊಫೇನಿನ ಜೀವವಸ್ತುವಾದ ಈ ಆಮ್ಲವನ್ನು ಆರೋಗ್ಯವಂತರು ಕೇವಲ 1% ರಷ್ಟನ್ನು ಮಾತ್ರ ಬಳಸಿದರೆ ಇಂಥ ರೋಗಿಗಳಲ್ಲಿ ಈ ಬಳಕೆ 60%ಕ್ಕೆ ಏರಿರಬಹುದು. == ಆರೋಗ್ಯ ಮತ್ತು ಪುಷ್ಟಿಗಾಗಿ ಅಮೈನೋ ಆಮ್ಲಗಳು == ಸೇವಿಸಿದ ಪ್ರೊಟೀನುಗಳು ಜಠರ, ಕರುಳುಗಳಲ್ಲಿರುವ ವಿವಿಧ ಪ್ರೊಟೀನ್ ಒಡೆವ ಕಿಣ್ವಗಳಿಂದ ಮೊದಲು ಅಮೈನೋ ಆಮ್ಲಗಳಾಗುತ್ತವೆ. ಆ ಮೇಲೆ ಈ ಅಮೈನೋ ಆಮ್ಲಗಳು ಸಣ್ಣ ಕರುಳಿನಲ್ಲಿ ಹೀರಲ್ಪಟ್ಟು ಜೀವವಸ್ತುಕರಣದ ಕೆಲಸಗಳಿಗೂ ಶರೀರದಲ್ಲಿ ಬೇರೆ ಬೇರೆ ಎಡೆಗಳಲ್ಲಿನ ಪ್ರೊಟೀನು ತಯಾರಿಕೆಗೂ ಸುತ್ತಾಡುವ ರಕ್ತದಲ್ಲಿ ದೊರೆಯುತ್ತವೆ. ಕೆಲವು ಆಹಾರಗಳು ಪುಷ್ಟಿಕೊಡುವಂಥವೆಂದೂ ಇನ್ನು ಕೆಲವು ಹಾಗಿಲ್ಲವೆಂದೂ ಎಷ್ಟೊ ಹಿಂದಿನ ಕಾಲದಿಂದಲೂ ತಿಳಿದಿದೆ. ಪ್ರೊಟೀನುಗಳಲ್ಲಿರುವ ಅಮೈನೋ ಆಮ್ಲಗಳಂತೆ ಆಹಾರದ ಪುಷ್ಟಿ ಇರುತ್ತದೆ. ರಾಸಾಯನಿಕವಾಗಿ ಚೊಕ್ಕವಾದ ಅಮೈನೋ ಆಮ್ಲಗಳ ಮಿಶ್ರಣಗಳನ್ನು ಜನರಿಗೆ ಕೊಟ್ಟು ನೋಡಿದ್ದರಿಂದ, ಪ್ರೊಟೀನುಗಳ ಸಮತೋಲ ಇರಬೇಕೆಂದು ತೋರಿದೆ. ಕೆಲವು ಆಹಾರ ಪದಾರ್ಥಗಳಲಿ-ಗೋಧಿ, ಅಕ್ಕಿ ಇತ್ಯಾದಿ ಧಾನ್ಯಗಳಲ್ಲಿ-ಲೈಸೀನ್ ಕೊರತೆ ಇರುವುದು ಗೊತ್ತಿದೆ. ತೊಗರಿ, ಕಡಲೆ ಮತ್ತಿತರ ಬೇಳೆಗಳಲ್ಲಿ ಗಂಧಕ ಇರುವ ಮೆತಿಯೊನೀನ್ ಅಮೈನೋ ಆಮ್ಲದ ಕೊರತೆಯಿದೆ. ಸರಿಯಾದ ಪುಷ್ಟಿಗೆ ಅವಶ್ಯಕ ಅಮೈನೋ ಆಮ್ಲಗಳೆಲ್ಲ ಆಹಾರದಲ್ಲಿ ಇದ್ದೇ ಇರಬೇಕಲ್ಲದೆ ಉಳಿದ ಅಮೈನೋ ಆಮ್ಲಗಳೂ ಗೊತ್ತಾದ ಪ್ರಮಾಣದಲ್ಲಿ ಇರಲೇಬೇಕು. ಏಕೆಂದರೆ ಅಮೈನೋ ಆಮ್ಲಗಳು ಒಂದಕ್ಕೊಂದು ಎದುರುಬಿದ್ದು ಕೆಲಸಕ್ಕೆ ಬಾರದಂತಾಗುತ್ತದೆ. ಅಲ್ಲದೆ ಸಮತೋಲವೂ ಕೆಡಬಹುದು. ಹಾಲಿನಲ್ಲಿನ ಪ್ರೊಟೀನ್, ಕಸೀನ್, ಮೊಟ್ಟೆಯ ಅಲ್ಬುಮಿನ್ ಸಮತೋಲಿತ ಪ್ರೊಟೀನುಗಳೆಂದು ಇಂಥ ಸಂಶೋಧನೆಗಳು ತೋರಿವೆ. ಹಾಲು ಇಲ್ಲದ ಅಚ್ಚ ಸಸ್ಯಾಹಾರದಲ್ಲಿ ಕೆಲವು ಅಮೈನೋ ಆಮ್ಲಗಳ ಕೊರತೆ ಆಗುವುದರಿಂದ, ಕೊರತೆಯಾದವನ್ನು ಇನ್ನಷ್ಟು ಒದಗಿಸಬೇಕಾಗುತ್ತದೆ. ಭಾರತದಲ್ಲಿ ವಿಷಮ ಬೇನೆಯಾದ ಕ್ವಾಷಿಯೋರ್ಕರ್ ವಿಶೇಷವಾಗಿದೆ. ಮೂಲ ಪ್ರೊಟೀನುಗಳಿಲ್ಲದೆ ಪುಷ್ಟಿಗೆಟ್ಟಿರುವುದೇ ಇದರ ಮುಖ್ಯ ಕಾರಣ. ಬೆಣ್ಣೆ ತೆಗೆದ ಹಾಲಿನಂಥ ಪ್ರೊಟೀನಿನ ಆಹಾರ ಕೊಡುವ ಸಕಾಲದ ಚಿಕಿತ್ಸೆಯಿಂದ ಈ ರೋಗಿಗಳು ಗುಣವಾಗುವರು. == ಅವಶ್ಯವಾದ, ಅವಶ್ಯವಲ್ಲದ ಅಮೈನೋ ಆಮ್ಲಗಳು == ಬದುಕಿರುವ ಜೀವಗಳು ಬೆಳವಣಿಗೆ, ಪಾಲನೆಗಳ ಅಳವಿನಲ್ಲಿ ಒಂದೊಂದೂ ಬೇರೆ ಬೇರೆ. ಕೆಳದರ್ಜೆಯ ಜೀವಿಗಳೂ ಉನ್ನತ ಸಸ್ಯಗಳ ಇಂಗಾಲ ಡೈಆಕ್ಸೈಡ್, ಅಮೋನಿಯ ಸಕ್ಕರೆಗಳು, ಗಂಧಕದ ಸಂಯುಕ್ತಗಳಂಥ ಸರಳ ವಸ್ತುಗಳಿಂದ ಅಮೈನೋ ಆಮ್ಲಗಳನ್ನು ತಯಾರಿಸಿಕೊಳ್ಳಬಲ್ಲವು. ಉನ್ನತ ಜೀವಿಗಳಾದ ಮನುಷ್ಯನಲ್ಲೂ ಇತರ ಪ್ರಾಣಿಗಳಲ್ಲೂ ಈ ಆಳವು ಒಂದಿಷ್ಟು ಕಳೆದಿದೆ. ಕೆಲವು ಅಮೈನೋ ಆಮ್ಲಗಳಂತೂ ಶರೀರದಲ್ಲಿ ತಯಾರಾಗುವುದೇ ಇಲ್ಲ. ಹೀಗೆ ಅವಶ್ಯವಾದ ಬೇಕೇಬೇಕಿರುವ ಅಮೈನೋ ಆಮ್ಲಗಳು ಎನಿಸಿಕೊಂಡವಲ್ಲಿ ಯಾವ ಒಂದು ಇಲ್ಲವಾದರೂ ಪುಷ್ಟಿಗೆಡುತ್ತದೆ. ಆದ್ದರಿಂದ ಅಂಥವನ್ನು ಆಹಾರದಲ್ಲಿ ಒದಗಿಸಲೇಬೇಕು. ಒಬ್ಬ ಹರೆಯದವನಿಗೆ 8 ಎಡಮುರಿ ಅಮೈನೋ ಆಮ್ಲಗಳು (ಟ್ರಿಪ್ಟೋಫೇನ್, ಫಿನೈಲನನೀನ್, ಲೈಸೀನ್, ತ್ರಿಯೊನೀನ್, ವ್ಯಾಲೀನ್, ಮತಿಯೊನೀನ್, ಲ್ಯೂಸೀನರ, ಐಸೊಲ್ಯೂಸೀನ್) ಬೇಕೇಬೇಕು. ಮಗುವಿಗೆ ಹಿಸ್ಟಿಡೀನ್ ಅರ್ಜಿನೀನ್‍ಗಳು ಬೇಕೇಬೇಕು. ಉಳಿದ ಅಮೈನೋ ಆಮ್ಲಗಳು (ಅಲನೀನ್ ಅಸ್ಪಾರ್ಟಿಕ್ ಆಮ್ಲ, ಸಿಸ್ಟೀನ್, ಗ್ಲುಟಾಮಿಕ್ ಆಮ್ಲ, ಗ್ಲೈಸೀನ್, ಹೈಡ್ರಾಕ್ಸಿಪ್ರೋಲೀನ್, ಪ್ರೋಲೀನ್, ಸೇರೀನ್, ಟೈರೊಸೀನ್ ಇತ್ಯಾದಿ) ಅಷ್ಟು ಬೇಕಾದವಲ್ಲ. ಕೊಡದಿದ್ದರೂ ಆಗುತ್ತದೆ. ಅವು ಶರೀರದಲ್ಲೇ ತಯಾರಾಗಬಹುದು. ಅಂದ ಮಾತ್ರಕ್ಕೆ ಬಹಳ ಕಾಲ ಇವನ್ನು ಕೊಡದೆಯೇ ಇರಬಹುದೆಂದು ಅರ್ಥವಲ್ಲ. ತೃಪ್ತಿಕರ ಬೆಳವಣಿಗೆ, ಫೋಷಣೆಗೆ ಎಲ್ಲ ಅಮೈನೋ ಆಮ್ಲಗಳನ್ನು ಒಟ್ಟಿಗೆ ಕೊಡುತ್ತಿರಲೇಬೇಕು. == ಅಮೈನೋ ಆಮ್ಲದಿಂದ ಪ್ರೋಟೀನ್ ತಯಾರಿಕೆ == ಈ ಹಿಂದೆ ಹೇಳಿದಂತೆ ಅಮೈನೋ ಆಮ್ಲಗಳ ಮೊದಲ ಕೆಲಸ ಮೈಯಲ್ಲಿನ ಪ್ರೋಟೀನುಗಳ ತಯಾರಿಕೆ. ಪ್ರೋಟಿನಿಗಾಗಿ ಬೇಕಿರುವ ಎಲ್ಲ ಅಮೈನೋ ಆಮ್ಲಗಳೂ ಒಟ್ಟಾಗಿ ದೊರೆತರೆ ಮಾತ್ರ. ಶರೀರದಲ್ಲಿ ಅವುಗಳ ತಯಾರಿಕೆ ಬಲುಬೇಗನೆ ಆಗುವುದು. ಅರೆಬರೆ ಪ್ರೋಟೀನನ್ನು ತಯಾರಿಸಿ ಇಟ್ಟುಕೊಂಡು, ಕೊರೆಯಾಗಿರುವ ಅಮೈನೋ ಆಮ್ಲಗಳಿಗಾಗಿ ಶರೀರ ಕಾದಿರದು. ಪ್ರೋಟೀನಿನಲ್ಲಿ ಅಮೈನೋ ಆಮ್ಲಗಳು ಒಂದು ಗೊತ್ತಾದ ಕ್ರಮದ ಜೋಡಣೆ ವಂಶಗುಣಗಳ ತಿಳುವಳಿಕೆಯಂತೆ ಇರುವುದು. ಇಲ್ಲಿನ ತನಕ ಗೊತ್ತಿರುವಂತೆ, ತಿಳುವಳಿಕೆ ಪ್ರೊಟೀನಿನ ಮೊದಲ ರಚನಾಕ್ರಮವನ್ನು ನಿರ್ಧರಿಸುವುದು. ಪ್ರೊಟೀನಿನ ಆಮೇಲಿನ ರಚನೆ ಈ ಮೊದಲ ಕ್ರಮವನ್ನೆ ಅವಲಂಭಿಸಿರುವುದು. ಜಲವಿಶ್ಲೇಷಣೆ ಆದಾಗ ಎಲ್ಲ ಪ್ರೊಟೀನುಗಳೂ ಅಮೈನೋ ಆಮ್ಲಗಳನ್ನು ಕೊಡುವುವು. ಅನೇಕ ಪ್ರೊಟೀನುಗಳಿಂದ ಬರುವ ಅಮೈನೋ ಆಮ್ಲಗಳು ಬಹುಮಟ್ಟಿಗೆ ಒಂದೇ ಬಗೆಯವು. ಇಷ್ಟಾದರೂ ಪ್ರೊಟೀನುಗಳ ನಿಜಕೆಲಸಗಳೂ ಗುಣಗಳೂ ಒಂದೊಂದೂ ಬೇರೆ ಬೇರೆ. ಕೆಲವು ನಾರಿನಂತಿದ್ದು ಕರಗದಿರುವುವು. (ಕೂದಲು, ರೇಷ್ಮೆ, ಅಂಟುಜನಕ), ನೀರಲ್ಲೂ ಉಪ್ಪಿನ ದ್ರಾವಣಗಳಲ್ಲೂ ಕೆಲವು (ಅಲ್ಬಮಿನ್, ಗ್ಲಾಬ್ಯುಲಿನ್‍ಗಳು, ಕಿಣ್ವಗಳು) ಕರಗುತ್ತವೆ. ಪ್ರೊಟೀನುಗಳ ಹುಟ್ಟುಗುಣದಲ್ಲಿ ಕಂಡುಬರುವ ವಿವಿಧತೆಗೆ ಅವುಗಳಲ್ಲಿರುವ ಕೊನೆಯ ಪಕ್ಷ 20 ಬೇರೆ ಬೇರೆ ಅಮೈನೋ ಆಮ್ಲಗಳು ಕಾರಣ. ಹೀಗಾಗೆ ಪ್ರ್ರೊಟೀನುಗಳ ತಯಾರಿಕೆಯ ಕ್ರಮದಲ್ಲಿ ಈ ಇಪ್ಪತ್ತು ಅಮೈನೋ ಆಮ್ಲಗಳನ್ನು ಅಪಾರ ಬಗೆಗಳಲ್ಲಿ ಜೋಡಿಸಬಹುದು. ಅಮೈನೋ ಆಮ್ಲಗಳು ಪೆಪ್ಟೈಡ್ ಕಟ್ಟುಗಳಾಗುವ ಮುಂಚೆ ಪಟುಗೊಳ್ಳಬೇಕು (ಆಕ್ಟಿವೇಟೆಡ್). ಇದಕ್ಕೆ ಬೇಕಾದ ಶಕ್ತಿ ಶರೀರದ ರಾಸಾಯನಿಕ ಭಂಡಾರವಾದ ಅಡಿನೊಸೀನ್ ಟ್ರೈ ಫಾಸ್ಫೇಟ್ ನಿಂದ (ಂಖಿ) ಬರುವುದು. ಹೀಗೆ ಪಟುಗೊಂಡು ಒಂದೊಂದು ಅಮೈನೋ ಆಮ್ಲವೂ ಆಮೇಲೆ (ಕರಗುವ) ಒಂದು ರಿಬೋನ್ಯೂಕ್ಲಿಯಿಕಾಮ್ಲದೊಡನೆ (.ಖಓಂ) ಕೂಡಿಕೊಳ್ಳುವುದು. ಈ ಬೇರೆ ಬೇರೆ ಖಓಂ ಅಮೈನೋ ಆಮ್ಲಗಳ ಸಂಕೀರ್ಣಗಳು ಒಂದು ಮೊದಲೇ ಗೊತ್ತಾದ ರೀತಿಯಲ್ಲಿ ಒಂದು ಮೂಲ ಅಚ್ಚಿನ ಮೇಲೆ ಜೋಡಣೆಯಾಗುವುವು. ಸುದ್ದಿಗಾರ-ಖಓಂ ಎಂಬ ಈ ಮೂಲ ಅಚ್ಚು. ಯಜಮಾನ ಅಣುವಾದ ಡಿಯಾಕ್ಸಿರೈಬೊನ್ಯೂಕ್ಲಿಯಿಕಾಮ್ಲದ (ಆಓಂ) ಮರುಪ್ರತಿ. ಆಓಂ ಜೀವಕಣದ ನಡುಬೀಜದಲ್ಲಿ (ನ್ಯೂಕ್ಲಿಯಸ್) ಮಾತ್ರ ಇರುವುದು. ಆದರೆ ಸಾಧಾರಣವಾಗಿ ಪ್ರೊಟೀನ್ ತಯಾರಾಗುವುದು ಜೀವಕಣರಸದಲ್ಲಿ. ನಡುಬೀಜದ ಹೊರಗಡೆ ಇರುವ ರಿಬೊಸೋಮ್‍ಗಳಲ್ಲಿ. ತಳಿಯ ತಿಳುವಳಿಕೆಗೆ ಭಂಡಾರವಾಗಿದ್ದು, ಪ್ರೊಟೀನು ತಯಾರಾಗುವ ಎಡೆಗೆ ತಳಿಯ ತಿಳುವಳಿಕೆಯನ್ನು ಈಗ ಬರೆದಿಡುವ ಸುದ್ದಿಗಾರನಾದ. ಆಓಂ ತನ್ನ ಮರುಪ್ರತಿಯನ್ನು ತಾನೇ ತಯಾರಿಸುತ್ತದೆ. ಈ ತಿಳುವಳಿಕೆಗೆ ಅನುಸಾರವಾಗಿ ಮೂಲ ಅಚ್ಚಿಗೆ ಅಮೈನೋ ಆಮ್ಲಗಳಲ್ಲಿ ಅಂಟಿಗೊಳ್ಳುತ್ತವೆ. ಪೆಪ್ಟೈಡು ಆಗುವಂತೆ ಪಟುಗೊಂಡ ಅಮೈನೋ ಆಮ್ಲಗಳ ಒಂದರೊಡನೊಂದರ ವರ್ತನೆಯಿಂದ ಪ್ರೊಟೀನ್ ರೂಪಗೊಂಡು ಮೂಲ ಅಚ್ಚಿನಿಂದ ಸುಲಿದುಬೀಳುತ್ತದೆ. ತಳಿಸಂಕೇತದ ಅರ್ಥವನ್ನು ಬಿಡಿಸಿದುದು ಇತ್ತೀಚಿನ ಮರ್ಷಗಳಲ್ಲಿನ ಎದ್ದು ತೋರುವ ವಿಜ್ಞಾನದ ಮುನ್ನಡೆಗಳಲ್ಲಿ ಒಂದು. ಬೇರೆ ಬೇರೆ ಬಗೆಗಳಲ್ಲಿ ಅಣಿಯಾಗಿರುವ ಅಡಿನೀನ್, ಗ್ವಾನೀನ್, ಸೈಟೊಸೀನ್ ಮತ್ತು ತೈಮೀನ್ ಗಳೆಂಬ ಪ್ರತ್ಯಾಮ್ಲಗಳಿರುವ ನಾಲ್ಕು ನ್ಯೂಕ್ಲಿಯೊಟೈಡುಗಳಿಂದ ಆಓಂ ಆಗಿದೆ. ಈ ನ್ಯೂಕ್ಲಿಯೊಟೈಡುಗಳ ಜೋಡಣೆ ಕ್ರಮದಲ್ಲಿ ತಳಿಸಂಬಂಧದ ತಿಳುವಳಿಕೆ ನೆಲೆಸಿರುವುದು. ಒಂದು ಅಮೈನೋ ಆಮ್ಲವಾದ ಮೇಲೆ ಮೂರು ನ್ಯೂಕ್ಲಿಯೊಟೈಡುಗಳು ಕ್ರಮವಾಗಿ ಇರುತ್ತದೆ. ವಿಶೇಷ ವಿಧಾನಗಳಿಂದ ಪ್ರೊಟೀನಿನ ಒಂದೊಂದು ಅಮೈನೋ ಆಮ್ಲಕ್ಕೂ ಈ ತ್ರಿವಳಿ (ಟ್ರಿಪ್‍ಲೆಟ್) ಸಂಕೇತವನ್ನು ಲೆಕ್ಕಹಾಕಲಾಗಿದೆ. ಹೀಗೆ ಜಟಿಲವಾದ ಆಹಾರದ ಪ್ರೊಟೀನನ್ನು ಸಾಮಾನ್ಯ ವಸ್ತುಗಳಾದ ಮೂಲ ಅಮೈನೋ ಆಮ್ಲಗಳನ್ನಾಗಿ ಮೊದಲು ಒಡೆದಿಳಿಸಿ ತಳಿವಸ್ತುವಾದ ನಿರ್ದೇಶನದಂತೆ ಶರೀರ ಬೇರೆ ಬೇರೆ ನಿಜಗೆಲಸಗಳನ್ನು ನಡೆಸಲು ಬೇಕಾದ ಪ್ರೊಟೀನುಗಳನ್ನು ಮತ್ತೆ ಕಟ್ಟುವ ವಿಶೇಷ ಆಳವನ್ನು ಈ ನಮ್ಮ ಶರೀರ ತೋರುತ್ತದೆ. ಸಳಿಯಿಂದಾಗುವ ಜೀವವಸ್ತುಕರಣದ ತಾರುಮಾರುಗಳು ಆಓಂ ಯ ಉತ್ಪರಿವರ್ತನ (ಮ್ಯುಟೇಷನ್) ಆಗುತ್ತವೆ. ಅಂದರೆ ನ್ಯೂಕ್ಲಿಯೊಟೈಡುಗಳ ಜೋಡಣೆ ಕ್ರಮಗೆಟ್ಟಾಗ ತಪ್ಪು ಪ್ರೊಟೀನಾಗುವುದು. ಯಾವ ಪ್ರೊಟೀನಿಗೂ ಸಂಕೇತ ಕೊಡದಿರಲೂಬಹುದು. ಹೇಗಾದರೂ ಸರಿಯೆ ಗೊತ್ತಾದ ಕಿಣ್ವದ ಪ್ರೊಟೀನು ತಯಾರಾಗದೆ ಶಾಶ್ವತವಾದ ತಳಿನ್ಯೂನತೆ ಉಂಟಾಗುವುದು. == ಉಲ್ಲೇಖಗಳು ==